ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂಬ ಮಾತೊಂದಿದೆ.
ನಮ್ಮ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರಂತೂ ತಮಾಷೆಯಾಗಿ "ರವಿ ಕಾಣದ್ದನ್ನು ಕವಿ ಕಂಡ,
ಕವಿಯೂ ಕಾಣದ್ದನ್ನು ಕುಡುಕ ಕಂಡ" ಎನ್ನುತ್ತಾರೆ. ಅದಿರಲಿ, ಆಕಾಶದಲ್ಲಿ ಬೆಳ್ಳಕ್ಕಿಗಳ ಹಿಂಡು
ಹಾರುತ್ತ ಹೋಗುತ್ತಿದ್ದರೆ ನಮಗೆ ಏನನ್ನಿಸಬಹುದು? ಬೆಳ್ಳಕ್ಕಿಗಳು ಎಷ್ಟು ಸುಂದರವಾಗಿದೆ ಎನ್ನಿಸಬಹುದು
ಅಥವಾ ನೋಡುವವರು ಯಾರಾದರೂ ದೊಡ್ಡ ಪಕ್ಷಿಶಾಸ್ತ್ರಜ್ಞರಾಗಿದ್ದರೆ ಅವರಿಗೆ ಹಕ್ಕಿಗಳ ವೈಜ್ಞಾನಿಕ ನಾಮಧೇಯ,
ಅವುಗಳ ಕುಟುಂಬ ಇತ್ಯಾದಿಗಳೆಲ್ಲ ನೆನಪಾಗಬಹುದು. ಆದರೆ ಕವಿಗೆ ಅವುಗಳ ಹಿಂಡು ದೇವರೇ ಮಾಡಿದ ರುಜುವಿನಂತೆ
ಭಾಸವಾಗುತ್ತದೆ. ಅಂಥ ಅದ್ಭುತ ಕವಿಯಾದ ಕುವೆಂಪು ಅವರ ಜನ್ಮಸ್ಥಳವಾದ ಕವಿಶೈಲಕ್ಕೆ ಹೋದರೆ, ಅಲ್ಲಿನ
ವಸ್ತುಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಕುವೆಂಪು ಅವರೇ ಮತ್ತೆ ಜೀವತಳೆದು ನಮ್ಮ ಪಕ್ಕದಲ್ಲಿ ನಿಂತಂತೆ
ಭಾಸವಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಪ್ರಕೃತಿ ಸಂಪತ್ತು ಹಾಗೂ ಅಂದಿನ ಪ್ರಕೃತಿಯ ಶ್ರೀಮಂತಿಕೆಯನ್ನು
ಕಂಡು ಮನಸ್ಸು ಮುದಗೊಳ್ಳುತ್ತದೆ. ಕವಿಶೈಲ ಮತ್ತು ಅಲ್ಲಿನ ಸುತ್ತಮುತ್ತಲಿನ ವಾತಾವರಣದಲ್ಲಿ ತೆಗೆದ
ಚಿತ್ರಗಳಿವು. ಮನೆಯೊಳಗಡೆ ಚಿತ್ರ ತೆಗೆಯಲು ನಿಷೇಧವಿದ್ದ ಕಾರಣ ಹೊರಗಿನಿಂದ ಮಾತ್ರ ಚಿತ್ರಗಳನ್ನು
ತೆಗೆಯಬೇಕಾಯಿತು.
No comments:
Post a Comment