ಕಳ್ಳಿಪೀರ, ಜೇನ್ನೊಣಬಾಕ, ಗಣಿಗಾರಲು ಹಕ್ಕಿ ಎಂಬ
ನಾನಾ ಹೆಸರುಗಳಿಂದ ಕರೆಯಲ್ಪಡುವ ಬೀ ಈಟರ್ ಹಕ್ಕಿಗಳು ಮೂಡಿಗೆರೆಯ ನಮ್ಮ ಮನೆಯ ಸುತ್ತಮುತ್ತ ಧಾರಾಳವಾಗಿವೆ.
ಮನೆಯ ಬಾಲ್ಕನಿಯ ಮೇಲೆ ನಿಂತು ನೋಡಿದರೆ ಸಾಕು, ಹತ್ತಾರು ಹಕ್ಕಿಗಳು ಜಮಾಯಿಸಿ ಮನೆಯ ಪಕ್ಕದಲ್ಲಿ ಹಾದುಹೋಗಿರುವ
ವಿದ್ಯುತ್ ತಂತಿಗಳ ಮೇಲೆ ಕುಳಿತು ಸುತ್ತೆಲ್ಲ ಕಣ್ಣು ಹಾಯಿಸುತ್ತಿರುತ್ತವೆ. ಎಲ್ಲಾದರೂ ಒಂದು ಜೋನುಹುಳವೋ
ಅಥವಾ ಬೇರಾವುದೇ ಕೀಟವೋ ಕಂಡುಬಂದರೆ ಹಾರಿಹೋಗಿ ಅವುಗಳನ್ನು ಹಿಡಿದುತಂದು ತಂತಿಗೇ ಚಚ್ಚಿಚಚ್ಚಿ ಕೊಂದು
ನುಂಗುತ್ತವೆ. ಗಾಳಿಯಲ್ಲೇ ಕೀಟಗಳನ್ನು ಹಿಡಿಯುವ ಕೌಶಲ್ಯದಲ್ಲಂತೂ ಅವಕ್ಕೆ ಸರಿಸಾಟಿಯಾದ ಹಕ್ಕಿಗಳು
ಬೇರೆ ಇಲ್ಲವೆಂದರೆ ತಪ್ಪಾಗಲಾರದು. ಈ ಹಕ್ಕಿಗಳ ಕೆಲವು ಅಪರೂಪದ ಚಿತ್ರಗಳಿವು.
No comments:
Post a Comment